Congress general secretary KC Venugopal instructs Former Chief minister Siddaramaiah to pacify rebel leaders as well as Jarkiholi brothers. Here are highlights of their visit.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರ ಭೇಟಿಯ ಮುಖ್ಯಾಂಶವೇನು? ಅವರು ಚರ್ಚಿಸಿದ ವಿಷಯಗಳಲು ಯಾವವು? ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೂ, ಸಿದ್ದರಾಮಯ್ಯ ಕಾಂಗ್ರೆಸ್ ನ ಪ್ರಶ್ನಾತೀತ ನಾಯಕ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆಗಲೋ, ಈಗಲೋ ಎಂಬಂತೆ ಅಲ್ಲಾಡುತ್ತಿರುವ ಸಮ್ಮಿಶ್ರ ಸರ್ಕಾರವನ್ನು ಸರಿದಾರಿಗೆ ತರುವುದಕ್ಕೆ ಸಿದ್ದರಾಮಯ್ಯ ಅವರಿಗೆ ಮಾತ್ರ ಸಾಧ್ಯ ಎಂಬ ನಿರ್ಧಾರಕ್ಕೂ ಕಾಂಗ್ರೆಸ್ ಹೈಕಮಾಂಡ್ ಬಂದಿದೆ. ಅದರ ಫಲವೇ ಅವರು ಯುರೋಪಿನಿಂದ ಬರುವುದನ್ನೇ ಕಾಯುತ್ತಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು ಮತ್ತು ಅವರೊಂದಿಗೆ ಬಹು ಸಮಯ ಚರ್ಚೆ ನಡೆಸಿದ್ದು. ಸದ್ಯಕ್ಕೆ ಸಿದ್ದರಾಮಯ್ಯ ತಲೆಮೇಲೆ ಮಣಭಾರದ ಜವಾಬ್ದಾರಿಗಳಿವೆ.